ರಾಗ : ಕಾಪಿ 
ತಾಳ: ಆದಿ
, ಕೃಷ್ಣಾ ಬಾರೋ  , ಕೃಷ್ಣಾ ಬಾರೋ 
, ಕೃಷ್ಣಯ್ಯ ನೀ ಬಾರಯ್ಯ  				|| ಪಲ್ಲವಿ  ||

, ಸಣ್ಣ ಹೆಜ್ಜೆಗಳಿಟ್ಟು  , ಗೆಜ್ಜೆ ನಾದಗಳಿಂದ 		|| ಪ || 

, ಮನ್ಮಥ ಜನಕನೆ ಬೇಗನೆ ಬಾರೋ
ಕಮಲಾಪತಿ ನೀ ಬಾರೋ
ಅಮಿತ ಪರಾಕ್ರಮ ಶಂಕರ ಬಾರೋ
ಕಮನೀಯ ಗಾತ್ರನೆ ಬಾರಯ್ಯ ದೊರೆಯೇ  		|| ಪ  ||

, ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ
ಮೇಲಾದಿ ಭಕ್ಷಗಳ ಮುಚ್ಚಿಟ್ಟು ತರುವೆ
, ಜಾಲ ಮಾಡದೆ ನೀ ಬಾರಯ್ಯ ಮರಿಯೇ
ಬಾರಾ ಎನ ತಂದೆ ಪುರಂದರ ವಿಠ್ಠಲ 		|| ಪ  ||